Monday 27 March 2023

ಸವಿನಯ ಮನವಿ

ಕಂಡ ಕನಸ ಹೊತ್ತು ಕಾಯುತ್ತಾ,

ಬದುಕುವಾಸೆಯ ಜೀವ ನೋಡುತ್ತಾ,

ಇಷ್ಟೆಲ್ಲಾ ಇದ್ದರೂ, ಮತ್ಸರವೇ ಮನುಜಾ,

ಸಮಯದ ಹಾದಿಯಲಿ ನಿನ್ನ ನೀನು ಸವೆಯುತ್ತಾ,

Monday 11 June 2018

ಅದೇನೊ ಸಂತಸ ನಿನ್ನ ಕಾಣಲು,

ಅದೇನೊ ಸಂತಸ ನಿನ್ನ ಕಾಣಲು,
ಭಾವನೆಯ ಭರದಲಿ, ಸ್ಮಿತೇಯನು ಕಳೆದುಕೊಂಡಾಗ ಮರಳಿತು,
ಅದೇನೊ ಸಂತಸ ನಿನ್ನ ಕಾಣಲು,
ಪ್ರತಿಕ್ಷಣದ ರಭಸದಲಿ, ಕೊಚ್ಚಿಹೋದ ನಗು, ಮರಳಿ ನಿನ್ನ ನೋಡಲು,
ಅದೇನೊ ಸಂತಸ ನಿನ್ನ ಕಾಣಲು,
ಜೀವನದ ತೂಗುಯ್ಯಾಲೇಯಲಿ ಕಂದ, ಅದೇನೊ ಸಂತಸ ನಿನ್ನ ಕಾಣಲು,
ನಿನ್ನ ನಗುವಿನ ಆ ಕೇನ್ನೆಗುಳಿಗೇ ನಾ ಕಾಲ್ಜಾರಲು,
ಅದೇನೊ ಸಂತಸ ನಿನ್ನ ಕಾಣಲು,

ಅರಳುತಿರಲಿ ನಿನ್ನ ಮೊಗದಿ ಆ ನಗು ಕೂಸೆ

ಅರಳುತಿರಲಿ ನಿನ್ನ ಮೊಗದಿ ಆ ನಗು ಕೂಸೆ,
ಸರದಲ್ಲಿಯ ಮಣಿಗಳಂತಿರಲಿ ಆ ನಿನ್ನ ಮಂದಹಾಸ,
ಮುಖದಲಿ ನಾ ಕಂಡ ಆ ಮೊದಲ ಮಂದಸ್ಮಿತ ಇನ್ನು ಮಾಸಿಲ್ಲ ಮನಸಿನಲ್ಲಿ,
ಕವನದಲಿ ಮೂಡುವ ಸ್ಪಂದನದಂತೇ,
ಅರಳುತಿರಲಿ ನಿನ್ನ ಮೊಗದಿ ಆ ನಗು ಕೂಸೆ,
ಮರೆಯದಿರು ಕೂಸೆ ಆ ತುಟಿಯಂಚಿನ ಸ್ಮಿತೇಯ, ಜೀವನದ ಪ್ರತೀಕ್ಷಣ ನಾ ಕಾಣ ಬಯಸುವ, ಅರಳುತಿರಲಿ ನಿನ್ನ ಮೊಗದಿ ಆ ನಗು ಕೂಸೆ,
ಹಂಬಲಿಸುವೆ ಆ ಸಂತಸ ನನ್ನ ಮನದಿ, ಮನೇಯಾಳದಲಿ ಕೂಸೆ, ನನ್ನಂಗಳದಲಿ ಅರಳುತಿರಲಿ ನಿನ್ನ ಮೊಗದಿ ಆ ನಗು ಕೂಸೆ.

Friday 8 June 2018

ಕನಸು ಕವನದ ನಡುವಣ ಪಯಣ

ಕನಸನ್ನು ಕಂಡು ಮರೆತೇಯಾ ನನ್ನ,
ಕವನವ ಓದಿ ಮರೆತೇಯಾ ನನ್ನ,
ಕನಸು ಕವನದ ನಡುವಣ ಪಯಣದಲ್ಲಿ,
ನೆನಪಾಗದಂತೇ ಮರೆತೇಯಾ ನನ್ನ,

ಕಳೆದುಕೊಂಡು ಪಡೆದ

ನೀ ಕಳೆದುಕೊಂಡು ಪಡೆದ ಸಂತಸ!!!
ನೀ ಮೂಡದ ಹೃದಯಾಳದ ಭಾವನೆ!!!
ನೀ ಕಾಣದ ಪ್ರಾಣದ ಉಸಿರೇಂಬ ಕೌತುಕ!!!
ಆದರು ನೀ ಏನೆಂದು ತಿಳಿಯದ ಮೂಕಸ್ಮಿತ!!!

ಪುತ್ರಿ ವ್ಯಾಮೋಹ

ಸಕೋಮಲೇಯನ್ನಲೇ ನಿನ್ನ ಸುಲಕ್ಷಣೇಯನ್ನಲೇ!!!
ಪ್ರತಿಭೆಯನ್ನಲೇ ನಿನ್ನ ಸ್ಪೂರ್ತಿಯನ್ನಲೇ!!!
ಕವಿಯನ್ನಲೇ ನಾನು ನಿನ್ನ ಕವಿತೇಯನ್ನಲೇ!!!
ಎಲ್ಲವು ಸೋಲುತಿವೆ ನಿನ್ನ ಬಣ್ಣಿಸಲಾಗದೇ...

ಮಗಳು

ಅರಸಿತು ಮನ ಸಹಜ ಸ್ನೇಹಕೆ, 
ಕೈ ಹಿಡಿಯಿತು ಪುಟ್ಟ ಜೀವ ಬಂದು ಸನಿಹಕೆ,
ಆ ಸುಂದರ ಅನುಭವಕೇ ಸಾಕ್ಷಿಯಾಗಿ ನಾನು,
ಹರಿಸುವೆ ತುಂಬು ಹೃದಯದ ಹೃತ್ಪೂರ್ವಕ ಪ್ರೇಮಗಳು.